ಬದುಕಿಗೊಂದು ಭರವಸೆಯ ಬೆಳಕು ಬೃಹತ್ ನಾಡು

ಬಿ.ಎಸ್.ಅಲಗು

(ಸಂಪಾದಕರು, ಪ್ರಕಾಶಕರು, ಮಾಲೀಕರು ಬೃಹತ್‌ನಾಡು)

ಡಿಪ್ಲೋಮಾ ಇನ್ (ಆಟೋಮೊಬೈಲ್) ಎಂಎ (ಜರ್ನಲಿಸಮ್) ಆರ್‌ಎಂಪಿ (ಸಿದ್ದ ಮೆಡಿಸನ್),

ಮುಜರಾಯಿ ದೇವಾಲಯ ಸಂಶೋಧಕರು,

ಆರ್‌ಟಿಐ `ಎ' ಶ್ರೇಣಿ ಪದವೀಧರರು/ ಡಿಪಿಎಆರ್ ದೆಹಲಿ/ ಕಾರ್ಯಕರ್ತರು (ಕರ್ನಾಟಕ)

ಶ್ರೀಯುತ ಬಿ.ಎಸ್.ಅಲಗು ಅವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದು; ಕಳೆದ 40 ವರ್ಷಗಳಿಂದ ಉದ್ಯಮಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ, ಭಾರತ ಮಾನವಹಕ್ಕು ಸಂಸ್ಥೆ (ಐಹೆಚ್‌ಓ) ಅಖಿಲ ಭಾರತ ಖಜಾಂಚಿಯಾಗಿ, ಕರ್ನಾಟಕ ವೃತ್ತಿ ನಿವೃತ್ತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆ ಕಾರ್ಯದರ್ಶಿಯಾಗಿ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ-ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ 20 ವರ್ಷಗಳಿಂದ ಮುದ್ರಣ ಮಾಧ್ಯಮದಲ್ಲಿ ತೊಡಗಿಕೊಂಡಿದ್ದು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಶೋಧನೆ ಮಾಡಿ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರಿಗೆ ಹಲವು ಅನುಕೂಲಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗಾಗಲೇ ಮುಜರಾಯಿ, ನೋಂದಣಿ ಇಲಾಖೆ, ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಮತ್ತು ಇನ್ನು ಹಲವು ಇಲಾಖೆಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ 4(1)(ಎ) ಮತ್ತು 4(1)(ಬಿ) ಅಳವಡಿಸಲು ಕಾರಣೀಭೂತರಾಗಿದ್ದಾರೆ.

`ಬೃಹತ್ ನಾಡು’ ಪತ್ರಿಕೆ ತಂಡ ಬೆಂಗಳೂರಿನಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಎಂಬ ಹೋರಾಟದಲ್ಲಿ ಯಶಸ್ಸು ಕಂಡಿದೆ. ಬಿಬಿಎಂಪಿ ಅಕ್ರಮ ಕಟ್ಟಡದ ಹೋರಾಟ, ಬೆಂಗಳೂರಿನಲ್ಲಿ ಅಧ್ಯಾಪಕರ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರ ಹೋರಾಟ ನಡೆಸಿ ನ್ಯಾಯ ಒದಗಿಸಿದ ಕೀರ್ತಿಗೆ ಭಾಜನವಾಗಿದೆ. ಬೆಂಗಳೂರು ನಗರದ ಹಿರಿಯ ನಾಗರೀಕರಿಗೆ ಕಣ್ಣು ತಪಾಸಣೆ ಹಾಗೂ ಶಸ್ತçಚಿಕಿತ್ಸೆ ಆಯೋಜಿಸಿ ಜನಪರವಾದ ಕೆಲಸಗಳಲ್ಲಿ `ಬೃಹತ್ ನಾಡು’ ಪತ್ರಿಕೆ ನಿರತವಾಗಿದೆ. ಹಾಗೂ ರಾಜ್ಯದ ಹಲವಾರು ಘನ ಸಂಸ್ಥೆಗಳು, ಪತ್ರಕರ್ತರ ಸಂಘ, ಮುಜರಾಯಿ ಇಲಾಖೆ ಮತ್ತು ಇನ್ನು ಇತರೆ ಹೊರರಾಜ್ಯಗಳಿಂದಲೂ ಶ್ರೀಯುತ ಬಿ.ಎಸ್.ಅಲಗು ಅವರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಮುಜರಾಯಿ ಇಲಾಖೆಯ ಸಾಧನೆಗಳು:

ಕಳೆದ 20 ವರ್ಷಗಳ ಹಿಂದೆ ಮುದ್ರಣ ಮಾಧ್ಯಮಕ್ಕೆ ಅಡಿಯಿರಿಸಿದ ಶ್ರೀ ಬಿ.ಎಸ್.ಅಲಗು ಅವರು `ಬೃಹತ್ ನಾಡು’ ಪತ್ರಿಕೆಯ ಮೂಲಕ ರಾಜಕೀಯ, ಮುದ್ರಾಂಕ, ಸನಾತನ, ಜನರ ಹಕ್ಕು ಸೇರಿದಂತೆ ಹತ್ತು ಹಲವಾರು ವಿಷಯಗಳ ಬಗ್ಗೆ ಜನಪರವಾದ ಲೇಖನಗಳ ಮೂಲಕ ಜನಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಮುಜರಾಯಿ ಇಲಾಖೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ದೇವಾಲಯಗಳ ಕೊಡುಗೆ ಮತ್ತು ದಾನ ನೀಡಿರುವ ಸುಮಾರು 3 ಲಕ್ಷಕಿಂತ ಹೆಚ್ಚು ಎಕರೆಗಳ ಜಮೀನಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡಿ ಅದಕ್ಕೆ ಸಂಬAಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಸರಕಾರದ ಗಮನಕ್ಕೆ ತಂದಿದ್ದು ಮಾತ್ರವಲ್ಲದೆ; ಈ ವಿಚಾರವನ್ನು ಅಂದಿನ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ರವರಿಗೆ ಪತ್ರ ಬರೆದು; ಅವರಿಂದಲೂ ಕರ್ನಾಟಕ ಮುಖ್ಯ ಕರ‍್ಯದರ್ಶಿಗಳಿಗೆ ನಿರ್ದೇಶಿಸಿ; ಸರಕಾರವು ಮುಜರಾಯಿ ದೇವಾಲಯ ಜಮೀನುಗಳನ್ನು ರಕ್ಷಿಸುವ ಸಲುವಾಗಿ ಶ್ರೀ ಬಾಲಸುಬ್ರಹ್ಮಣ್ಯಂ ಸಮಿತಿಯನ್ನು ರಚಿಸಿ ಆದೇಶ ಹೊರಡಿಸುವಲ್ಲಿ ಇವರ ಪಾತ್ರ; ಶ್ರಮ ಸ್ಮರಣೀಯ. ಇದರಿಂದ ದೇವಾಲಯದ ನೂರಾರು ಎಕರೆ ಜಮೀನುಗಳು ರಕ್ಷಿಸಿದ್ದು ಬಿ.ಎಸ್.ಅಲಗು ಅವರ ಶ್ರಮದ ಸಾರ್ಥಕತೆಯನ್ನು ಬಿಂಬಿಸುತ್ತದೆ.

ರಾಜ್ಯದ `ಎ’ ಮತ್ತು `ಬಿ’ ವರ್ಗದ ದೇವಾಲಯಗಳಿಂದ ಸರಕಾರ ಲೆಕ್ಕ ಪರಿಶೋಧನೆ ಮಾಡಲು ಶೇಕಡಾ 3 ರಿಂದ 5ರಷ್ಟು ಶುಲ್ಕ ಪಡೆಯುತ್ತಿದ್ದು ಶ್ರೀ ಬಿ.ಎಸ್.ಅಲಗುರವರ ಸಂಶೋಧನೆಯ ಫಲವಾಗಿ ಸರಕಾರದ ಮುಜರಾಯಿ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲಿ ಶ್ರೀ ಬಿ.ಎಸ್.ಅಲಗುರವರ ಶಿಫಾರಸ್ಸನ್ನು ಗಣನೆಗೆ ತೆಗೆದುಕೊಂಡು ದೇವಾಲಯದ ಲಕ್ಷಾಂತರ ರೂಪಾಯಿ ಹಣವನ್ನು ದೇವಾಲಯದಲ್ಲೇ ಉಳಿಯುವಂತೆ ಮಾಡಲಾಯಿತು.

ಶಬರಿಮಲೆ ಯಾತ್ರಿಗಳಿಗೆ ವಿಶೇಷವಾಗಿ ನಮ್ಮ ರಾಜ್ಯದ ಭಕ್ತರಿಗೆ ಛತ್ರವಿಲ್ಲದೆ ಇರುವುದನ್ನು ಪ್ರಸ್ತಾಪಿಸಿ ಕೇರಳದ ತಿರುವಂಕುರ ಮಂಡಳಿಗೆ ಮಾತನಾಡಿ ಅಂದಿನ ಆಯುಕ್ತರಾದ ಕರ್ನಾಟಕದ ಶ್ರೀ ಬಿ.ಜಿ.ನಂದಕುಮಾರ ರವರ ಸಹಕಾರದೊಂದಿಗೆ ನೀಲಕಲ್ಲು ಸಮೀಪ ಐದು ಎಕರೆ ಜಾಗ ಮಂಜೂರು ಮಾಡಿಸಿ ಆ ಜಾಗಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಅದೇ ರೀತಿ ಕರ್ನಾಟಕ ಛತ್ರ ವಾರಣಸಿ, ಮಂತ್ರಾಲಯ, ಶ್ರೀಶೈಲ, ಪಂಡರಾಪುರ ಮತ್ತು ಕಲ್ಕತ್ತಾದಲ್ಲಿದ್ದ ಮುಜರಾಯಿ ಇಲಾಖೆಯ ಆಸ್ತಿಗಳನ್ನು ಅಭಿವೃದ್ಧಿಗೊಳಿಸಲು ಶ್ರೀ ಬಿ.ಎಸ್.ಅಲಗು ಅವರ ಗಣನೀಯವಾಗಿದೆ ಹಾಗೂ ಸಂಬಂಧಪಟ್ಟ ಮಹಾರಾಜರ ದಾಖಲೆಗಳನ್ನು ಸಹ ಮುಜರಾಯಿ ಇಲಾಖೆಗೆ ನೀಡಲಾಗಿದೆ. ಈ ಎಲ್ಲದರ ಹಿಂದಿನ ಧೀ ಶಕ್ತಿ ಶ್ರೀ.ಬಿ.ಎಸ್.ಅಲಗುರವರಾಗಿದ್ದಾರೆ.

ಮುಜರಾಯಿ ಇಲಾಖೆಯ ದೇವಾಲಯ ನೌಕರರ ವೇತನ ಶ್ರೇಣಿ ವಿಚಾರಕ್ಕೆ ಸಂಬಂಧಪಟ್ಟಂತೆ ಶ್ರೀ.ಬಿ.ಎಸ್.ಅಲಗುರವರು ತಮ್ಮ `ಬೃಹತ್ ನಾಡು’ ಪತ್ರಿಕೆಯಲ್ಲಿ ಪ್ರಕಟ ಮಾಡಿ ಸರ್ಕಾರದ ಗಮನಕ್ಕೆ ತಂದು ಅವರಿಗೆ ವೇತನ ನಿಗಧಿಪಡಿಸಿದ ಹೆಮ್ಮೆಯು ಅವರದ್ದಾಗಿದೆ. ಕರ್ನಾಟಕ ಸರ್ಕಾರದ ನೌಕರರಿಗೆ ಹಾಗೂ ರಾಜ್ಯದ ದೇವಾಲಯದ ಅರ್ಚಕರು ಮತ್ತು ಆಗಮಿಕರ ಆರೋಗ್ಯ ವಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತಂದು, ಸರಕಾರ ಅದನ್ನು ಪರಿಗಣಿಸಿ ನೌಕರರಿಗೆ ಅನುಕೂಲ ಮಾಡಿಕೊಟ್ಟ ಮಹತ್ಕಾರ್ಯದ ಹಿಂದೆ `ಬೃಹತ್ ನಾಡು’ ಪತ್ರಿಕೆಯ ಪಾತ್ರ ಸ್ಮರಣೀಯವಾಗಿದೆ.

ಅದೇ ರೀತಿ ಕೆಲವು ಮಠಗಳ ಅಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸಿ ಮಠಗಳಿಗೆ; ವಿಶೇಷವಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿರವರಿಗೆ ನೀಡಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ:

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕರ್ನಾಟಕ ಈ ಇಲಾಖೆಗೆ ಹಲವಾರು ಅಧಿಕಾರಿಗಳು, ನೌಕರರ ಪದೋನ್ನತಿ, ಮುಂಬಡ್ತಿ ಹಾಗೂ ಕಂದಾಯ ವಸೂಲಿಗೆ ಸಂಬAಧಿಸಿದAತೆ ಲೇಖನಗಳನ್ನು ಮಾಡಿ ಸರ್ಕಾರದ ಗಮನಕ್ಕೆ ತರಲಾಗಿದೆ.

ಈ ಇಲಾಖೆಗೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಹಲವು ದಾಖಲೆಗಳ ಬಗ್ಗೆ ನಿಯಮಾನುಸಾರ ಕಾಪಾಡಿಕೊಳ್ಳಲು ಸಲಹೆ ಹಾಗೂ ಸೂಚನೆಗಳನ್ನು ನೀಡಿ ಯಶಸ್ವಿಗೊಳಿಸುವಲ್ಲಿ ಶ್ರೀ.ಬಿ.ಎಸ್.ಅಲಗುರವರು ಯಶಸ್ವಿಗೊಳಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪ್ಪು ದಾರಿಗೆ ಹೋದಾಗ ಅಂತಹ ಅಧಿಕಾರಿಗಳ ವಿರುದ್ಧವೂ ಲೇಖನಗಳನ್ನು ಮಾಡಿ ಕಂದಾಯ ಸಚಿವರ ಗಮನಕ್ಕೆ ತಂದು ಸರಿಪಡಿಸಿರುವ ಹಲವು ಉದಾಹರಣೆಗಳಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹಲವು ನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದೆಯಿದ್ದು ಮಾನ್ಯ ಸರ್ಕಾರಕ್ಕೆ ಹಾಗೂ ಇಲಾಖೆಗೆ ಖಾಲಿಯಿರುವ ನಿವೇಶನಗಳು ಮತ್ತು ಅದಕ್ಕೆ ಸಂಬAಧಪಟ್ಟ ಲೇಖನಗಳನ್ನು ಮಾಡಿ ಗಮನ ಸಂದಿರುವ ಸಾರ್ಥಕ ಸೇವೆ ಶ್ರೀ ಬಿ.ಎಸ್.ಅಲಗು ಅವರದ್ದು.

ಬಿಬಿಎಂಪಿಯ ಕಂದಾಯ ವಸೂಲಿಯಲ್ಲಿ ಸಂಶೋಧನೆ ಮಾಡಿ ಅಂದಿನ ಬಿಬಿಎಂಪಿ ಆಯುಕ್ತರು ಹಾಗೂ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಆ ಹಿನ್ನೆಲೆಯಲ್ಲಿ 560 ಕೋಟಿ ಒಂದು ವರ್ಷದ ಆದಾಯವನ್ನು ಸುಮಾರು 2500 ಕೋಟಿ ಹೆಚ್ಚಳ ಮಾಡಿದ್ದ ಹೆಮ್ಮೆಯು ಶ್ರೀ.ಬಿ.ಎಸ್.ಅಲಗುರವರದ್ದು.

ನಮ್ಮ ದೇಶದಲ್ಲಿ ನಕಲಿ ನೋಟು ಚಲಾವಣೆ ವಿಷಯಕ್ಕೆ ಸಂಬAಧಿಸಿದAತೆ ಸಂಶೋಧನೆ ಮಾಡಿ ದೇಶದ ನೋಟು ಮುದ್ರಾಂಕ ಮಾಡುವ ಸ್ಥಳದಿಂದ ಮಾಹಿತಿಯನ್ನು ಪಡೆದು ಸಂಶೋಧನೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದ್ದು ಅದಕ್ಕೆ ಪ್ರಧಾನ ಮಂತ್ರಿಗಳು ನೋಟ್ ಡಿಮಾನಿಟೇಷನ್ ಮಾಡಲು ನಮ್ಮ ಪತ್ರಿಕೆಯ ಒಂದು ಕೊಡುಗೆಯಾಗಿರುತ್ತದೆ. ಕಾರಣ ನಮ್ಮ ನೆರರಾಷ್ಟçದಲ್ಲಿ ನಮ್ಮ ಸರ್ಕಾರದ 2000 ಹಾಗೂ 1000 ರೂಪಾಯಿಗಳ ನೋಟುಗಳನ್ನು ಚಲಾವಣೆ ಮಾಡುತ್ತಿದ್ದು ನಮ್ಮ ದೇಶಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದ ಹಿನ್ನಲೆಯಲ್ಲಿ ಇದನ್ನು ಸರಿಪಡಿಸುವಲ್ಲಿ ಇವರ ಸಲಹೆಯೂ ಒಂದು ಪ್ರಮುಖ ಪಾತ್ರ ವಹಿಸಿತ್ತು.

ಕರ್ನಾಟಕದ ಕಲಬುರ್ಗಿ ಹಾಗೂ ಬೀದರ್, ಬಾಗಲಕೋಟೆ, ಜಿಲ್ಲೆಗಳಿಂದ ವಲಸೆ ಹೋದ ಹಲವು ಕಟ್ಟಡ ಕಾರ್ಮಿಕರು ಮತ್ತು ಕೂಲಿ ಕೆಲಸಕ್ಕೆ ಹೋದಂತಹ ನಮ್ಮ ಜನರು ಕರ್ನಾಟಕ ನೆರೆರಾಜ್ಯವಾದ ಗೋವಾದಲ್ಲಿ, ತೊಂದರೆ ಅನುಭವಿಸಿದ್ದು ಆ ಕಾರಣಕ್ಕೆ ನಮ್ಮ ಒಂದು ಸಂಸ್ಥೆಯಿAದ ಗೋವಾ ರಾಜ್ಯದ ವಾಸ್ಕೋ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸಿ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಹಾಗೂ ಅಂದಿನ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರ ಗಮನಕ್ಕೆ ತಂದು ನಮ್ಮ ರಾಜ್ಯದ ಜನರ ಹಿತದೃಷ್ಟಿಯನ್ನು ಶ್ರೀ.ಬಿ.ಎಸ್.ಅಲಗುರವರು ಕಾಪಾಡಲು ಶ್ರಮಿಸಿದ್ದಾರೆ.

ನಮ್ಮ ರಾಜ್ಯದ ಕಾರ್ಮಿಕ ಇಲಾಖೆಯ ಇಎಸ್‌ಐ ಆಸ್ಪತ್ರೆಗಳಲ್ಲಿ ಹಲವು ಅಕ್ರಮಗಳ ಬಗ್ಗೆ ಸಂಶೋಧನೆ ನಡೆಸಿ ದಾಖಲೆಗಳ ಜೊತೆಯಲ್ಲಿ ವರದಿಯನ್ನು ಮಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಂಸ್ಥೆಗೆ ಅಂದಿನ ಎಸಿಬಿ ಚಿತ್ರದುರ್ಗದ ಹಿರಿಯೂರು ದೂರು ನೀಡಿದ್ದು ಆ ಬಳಿಕ ಇಎಸ್‌ಐ ಆಸ್ಪತ್ರೆಗಳಲ್ಲಿ ಹಲವು ಅಕ್ರಮಗಳನ್ನು ಸಕ್ರಮಗೊಳಿಸಲು ಇವರು ಕಾರಣಕರ್ತರಾಗಿದ್ದಾರೆ.

ವೇದಾವತಿ ನದಿ ಶುದ್ಧಗೊಳಿಸಲು ಹೋರಾಟದಲ್ಲಿ ಭಾಗಿಯಾಗಿದ್ದ ಹೆಮ್ಮೆಯು ಶ್ರೀ. ಬಿ.ಎಸ್.ಅಲಗು ಅವರದ್ದು.

ನಮ್ಮ ರಾಜ್ಯದ ಹಲವು ರಾಜಕೀಯ ಲೇಖನಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಮಾಡಿ ಸರ್ಕಾರವನ್ನು ಎಚ್ಚೆತ್ತುಕೊಳ್ಳಲು ಕಾರಣಕರ್ತರಾಗಿದ್ದಾರೆ.

ಇಂತಹ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಸಾರ್ವಜನಿಕರ ಹಿತದೃಷ್ಟಿ ಹಾಗೂ ಸರಕಾರದ ನಿಯಮಗಳನ್ನು ಸರಕಾರಿ ನೌಕರರಿಂದ ಉಲ್ಲಂಘನೆ ಆಗದೆಯಿರಲು ಶ್ರೀ.ಬಿ.ಎಸ್.ಅಲಗುರವರ ಹಾಗೂ `ಬೃಹತ್ ನಾಡು’ ಪತ್ರಿಕೆಯ ಪ್ರಯತ್ನವು ಸದಾ ಇರುತ್ತದೆ. `ಬೃಹತ್ ನಾಡು’ ಇಂತಹ ಧ್ಯೇಯವನ್ನು ಸದಾ ಮುಂದುವರೆಸಲು ರಾಜ್ಯ ಹಾಗೂ ದೇಶದ ಗಮನಕ್ಕೆ ತರಲು ತಾ|| 16-01-2025ರಂದು ಅಂತರ್ಜಾಲ ಮಾಧ್ಯಮದ ಮುಖೇನ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರನ್ನು ತಲುಪಲು ಮಹತ್ವದ ಹೆಜ್ಜೆ ಇರಿಸಿದೆ. ನಿಮ್ಮ ಸಹಕಾರ, ಪ್ರೋತ್ಸಾಹ ಸದಾ ಇರಲಿ.